ಸಂಪದ ಕನ್ನಡಕ್ಕಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿರುವ ಒಂದು ತಂಡ. ಈ ತಂಡದ ಅಂತರ್ಜಾಲ ಪುಟ ಇದು.
ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಸುದ್ದಿ

ಜಿ ಟಿ ನಾರಾಯಣರಾವ್ ಸಂದರ್ಶನ

ಹೋದ ತಿಂಗಳು ಮೈಸೂರಿನಲ್ಲಿ ಜಿ ಟಿ ನಾರಾಯಣರಾವ್ ಅವರನ್ನು ಭೇಟಿ ಮಾಡಿದ್ದೆವು. ಅವರೊಂದಿಗೆ ನಡೆಸಿದ ಸಂದರ್ಶನ, ವಿಡಿಯೋ ಕೆಳಗಿನ ಲಿಂಕುಗಳಲ್ಲಿ ಲಭ್ಯ:

http://sampada.net/podcasts/8/G-T-Narayana-Rao

http://sampada.net/video/1

ಕೇಳಿ, ವೀಕ್ಷಿಸಿ ನಿಮ್ಮ ಪ್ರತಿಕ್ರಿಯೆಗಳನ್ನು ಮರೆಯದೆ ಸೇರಿಸಿ. :-)

ಪ್ಲಾನೆಟ್ ಕನ್ನಡ ಈಗ planetkannada.com ನಲ್ಲಿ ಲಭ್ಯ

ಇಷ್ಟು ದಿನಗಳ ಕಾಲ http://planet.sampada.net ನಲ್ಲಿ ಲಭ್ಯವಿದ್ದ ಪ್ಲಾನೆಟ್ ಕನ್ನಡಕ್ಕೆ ಈಗ ಹಲವರ ಕೋರಿಕೆಯಂತೆ http://planetkannada.com ನಲ್ಲಿ ಲಭ್ಯ.

ಹಳೆಯ URL ಈಗ ಹೊಸ ಡೊಮೈನಿಗೆ ತಂತಾನೆ ರೀಡೈರೆಕ್ಟ್ ಅಗುತ್ತದೆ. ಹೀಗಾಗಿ ಹಳೆಯ ಬುಕ್ಮಾರ್ಕುಗಳು ಈಗಲೂ ಕೆಲಸ ಮಾಡುವುವು.

ಸಂಪದ ಸರ್ವರ್ ಅಪ್ಗ್ರೇಡ್

ಸಂಪದ ಸರ್ವರ್ ಅಪ್ಗ್ರೇಡ್ ಮಾಡಲಾಗಿದೆ. ಅಪ್ಗ್ರೇಡ್ ನಡೆಸಿಕೊಟ್ಟ ಸ್ನೇಹಿತ ಶಶಿಶೇಖರ್ ಗೆ ಸಮುದಾಯದ ಎಲ್ಲರ ಪರವಾಗಿ ಕೃತಜ್ಞತೆಗಳು.